ಆಟದಲ್ಲಿ ಸಮೀರಾಚಾರ್ಯ ಅಷ್ಟೊಂದು ರೊಚ್ಚಿಗೆದ್ದಿದ್ದು ಯಾಕೆ.? 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ತಾಳ್ಮೆ ಹಾಗೂ ಸಹನೆಯ ಪ್ರತೀಕವಾಗಿದ್ದ ಸಮೀರಾಚಾರ್ಯ, ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಆಕ್ರಮಣಕಾರಿ ಆದರು. ತಾಳ್ಮೆ ಕಳೆದುಕೊಂಡು ಕೂಗಾಡಿದರು.
ಕ್ಯಾಪ್ಟನ್ ರಿಯಾಝ್ ಹೇಳಿದ ಮಾತುಗಳನ್ನೂ ಕೇಳದ ಮಟ್ಟಕ್ಕೆ ಸಮೀರಾಚಾರ್ಯ ರೊಚ್ಚಿಗೆದ್ದದ್ದು ಯಾಕೆ ಎಂಬ ಪ್ರಶ್ನೆಗೆ ಸ್ವತಃ ಸಮೀರಾಚಾರ್ಯ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಉತ್ತರ ಕೊಟ್ಟಿದ್ದಾರೆ. ''ತಾವು ಇಷ್ಟು ಆಕ್ರಮಣಕಾರಿ ಆಗೋದು ಬೇಕಿತ್ತಾ.?'' ಅಂತ ಸುದೀಪ್ ಕೇಳಿದ್ದಕ್ಕೆ, ಸಮೀರಾಚಾರ್ಯ ಕೊಟ್ಟ ಉತ್ತರ ಇದು - ''ನನಗೆ ಟಾಸ್ಕ್ ಬಗ್ಗೆ ಲಕ್ಷ್ಯ ಇತ್ತು. ಯಾಕಂದ್ರೆ, ತಮ್ಮ ತಂಡದಲ್ಲಿ ಜೆಕೆ ಅವರಿಗೆ ಕಾಲು ನೋವಾಗಿತ್ತು. ತೆಂಗಿನಕಾಯಿಯನ್ನ ನಾನೊಬ್ಬನೇ ತೆಗೆದುಕೊಂಡು ಬರಬೇಕಾಗಿತ್ತು. ಇನ್ನೊಂದು ಕಡೆ ಬರೀ ಹೆಣ್ಮಕ್ಕಳೇ ಇದ್ದರು. ಹೀಗಾಗಿ ನನಗೆ ಬೇರೆ ವಿಧಿ ಇರಲಿಲ್ಲ. ಪರಿಸ್ಥಿತಿ ಹಾಗಿತ್ತು. ಅದಕ್ಕೆ ನಾನು ತೋರಿಸಬೇಕಾಯಿತು'' ಒಳ್ಳೆಯವರಿಗೆ ಕೋಪ ಬರಿಸುವುದು ದೊಡ್ಡ ಮುಠ್ಠಾಳತನ.!